•  
  •  
  •  
  •  
Index   ವಚನ - 495    Search  
 
ಕರ್ಣದ ಕೊನೆಯಲ್ಲಿ ಎರಡು ಪರ್ಣ ಹುಟ್ಟಿ ನಿರ್ನಾಮ ಶ್ರುತವ ನೆಲೆಗೊಳಲೀಯವು ನೋಡಾ. ಕರ್ಣದ ಕೊನೆಯ ಪರ್ಣವ ಹರಿದು ನಿರ್ಮಲ ನಿರಾವರಣನೇ ಕರ್ಣವಾಗಿಪ್ಪ ಪ್ರಭುದೇವರ ಪಾದಕ್ಕೆ ನಮೋ ನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Karṇada koneyalli eraḍu parṇa huṭṭi nirnāma śrutava nelegoḷalīyavu nōḍā. Karṇada koneya parṇava haridu nirmala nirāvaraṇanē karṇavāgippa prabhudēvara pādakke namō namōyembenu kāṇā, mahāliṅgaguru śivasid'dhēśvara prabhuvē.