ಶುದ್ಧ ಶಿವತತ್ವವೇದ್ಯವಾಗಿ ಶಬ್ದಮುಗ್ಧನಾದೆನಾಗಿ
ಮೂರ್ತಿ ಅಮೂರ್ತಿ ತತ್ವಾತತ್ವಂಗಳನರಿಯೆ.
ಮದ ಮೋಹಂಗಳ ಮರೆದೆ.
ಅದೇನುಕಾರಣವೆಂದರೆ:
ಮಂದೆ ಅರಿವುದಕ್ಕೆ ಕುರುಹಿಲ್ಲವಾಗಿ.
ಅರುಹು ಕುರುಹುನೊಳಕೊಂಡು
ತೆರಹಿಲ್ಲದ ಪರಿಪೂರ್ಣನಿಗೆ ಮಾಯವೆಲ್ಲಿಯದೋ?
ದೇಹಮದೆಲ್ಲಿಯದು? ದೇಹಿಯದೆಲ್ಲಿಯವನು?
ಮಾಯ ದೇಹ ದೇಹಿಯಿಲ್ಲವಾಗಿ
ಸ್ವಯವೆಲ್ಲಿಯದು ಪರವೆಲ್ಲಿಯದು?
ಪರವಸ್ತು, ತಾನಾದ ಶರಣಂಗೆ ಮುಂದೇನನು ಹೇಳಲಿಲ್ಲ ಕಾಣಾ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Śud'dha śivatatvavēdyavāgi śabdamugdhanādenāgi
mūrti amūrti tatvātatvaṅgaḷanariye.
Mada mōhaṅgaḷa marede.
Adēnukāraṇavendare:
Mande arivudakke kuruhillavāgi.
Aruhu kuruhunoḷakoṇḍu
terahillada paripūrṇanige māyavelliyadō?
Dēhamadelliyadu? Dēhiyadelliyavanu?
Māya dēha dēhiyillavāgi
svayavelliyadu paravelliyadu?
Paravastu, tānāda śaraṇaṅge mundēnanu hēḷalilla kāṇā.
Mahāliṅgaguru śivasid'dhēśvara prabhuvē.