•  
  •  
  •  
  •  
Index   ವಚನ - 584    Search  
 
ಸಾಳುವನ ಹಕ್ಕಿಯನು ಪಾಳೆಯದ ನಾಯಿ ಹಿಡಿದುದ ಕಂಡೆನಯ್ಯ. ನಾಯಿ ಹಿಡಿದಿಪ್ಪ ನಾಕಿತಿ ನಾಗರಕಾಟವಾಗಿ ಕಾಡುತ್ತಿಪ್ಪಳಯ್ಯ. ನಾಗರಿಗೆ ಮದ್ದ ಹೇಳ ಬಂದಯ್ಯಗಳು ನಾಕಿತಿಯ ನಟನೆಯಲ್ಲಿ ಸಿಲುಕಿದರು. ಈ ಲೋಗರನಾಚಾರ್ಯರೆಂತೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Sāḷuvana hakkiyanu pāḷeyada nāyi hiḍiduda kaṇḍenayya. Nāyi hiḍidippa nākiti nāgarakāṭavāgi kāḍuttippaḷayya. Nāgarige madda hēḷa bandayyagaḷu nākitiya naṭaneyalli silukidaru. Ī lōgaranācāryarentembenayyā, mahāliṅgaguru śivasid'dhēśvara prabhuvē.