•  
  •  
  •  
  •  
Index   ವಚನ - 663    Search  
 
ಸೋಮನಾಳದಲ್ಲಿ [ಶುಭ್ರ] ಕಳೆ, ಪಿಂಗಳನಾಳದಲ್ಲಿ ಸುವರ್ಣಕಳೆ, ಸುಷುಮ್ನನಾಳದಲ್ಲಿ ಸುಜ್ಞಾನಜ್ಯೋತಿಯ ಬೆಳಗು ನೋಡಾ. ಏಳುನೂರೆಪ್ಪತ್ತು ನಾಳದಲ್ಲಿ ಹೊಳೆವುತ್ತಿಹ ಕಾಲಾಗ್ನಿಯ ಕಾಂತಿ. ನೀಲಲೋಹಿತನ ಪ್ರಸಾದದುದಯ ತುದಿಮೊದಲಿಲ್ಲ ನೋಡಾ. ಆದಿ ಮಧ್ಯಾವಸಾನವಿಲ್ಲದ ಪ್ರಮಾಣ ಪ್ರಸಾದದಲ್ಲಿ ನಿಷ್ಪತಿಯಾಗಿ ನಿಜಲಿಂಗೈಕ್ಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Sōmanāḷadalli [śubhra] kaḷe, piṅgaḷanāḷadalli suvarṇakaḷe, suṣumnanāḷadalli sujñānajyōtiya beḷagu nōḍā. Ēḷunūreppattu nāḷadalli hoḷevuttiha kālāgniya kānti. Nīlalōhitana prasādadudaya tudimodalilla nōḍā. Ādi madhyāvasānavillada pramāṇa prasādadalli niṣpatiyāgi nijaliṅgaikyanādenu kāṇā, mahāliṅgaguru śivasid'dhēśvara prabhuvē.