•  
  •  
  •  
  •  
Index   ವಚನ - 677    Search  
 
ಮಹದಾಕಾಶ ಘಟ ಭೇದದಿಂದ ಘಟಾಕಾಶ ಮಹದಾಕಾಶವಾಗಿ ತೋರಿದರೆ ಆಕಾಶವೊಂದಲ್ಲದೆರಡುಂಟೇ ಮರುಳೆ? ಪರಶಿವ ತಾನೆ ತನ್ನ ಶಕ್ತಿಭೇದದಿಂದ ಶರಣ ಲಿಂಗವೆಂದಡೆ ಶರಣ ಲಿಂಗಕ್ಕೆ ಭಿನ್ನವೆಲ್ಲಿಯದೋ? ಈ ಶರಣಮತವು ಪ್ರಕೃತಿಯಿಂದಾದ ದ್ವೈತಾದ್ವೈತ ಮತವಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Mahadākāśa ghaṭa bhēdadinda ghaṭākāśa mahadākāśavāgi tōridare ākāśavondalladeraḍuṇṭē maruḷe? Paraśiva tāne tanna śaktibhēdadinda śaraṇa liṅgavendaḍe śaraṇa liṅgakke bhinnavelliyadō? Ī śaraṇamatavu prakr̥tiyindāda dvaitādvaita matavalla kāṇā, mahāliṅgaguru śivasid'dhēśvara prabhuvē.