ನಿರಾಕಾರ ಪರವಸ್ತು ತಾನೇ
ಸದ್ರೂಪು ಚಿದ್ರೂಪು ಆನಂದ
ಸ್ವರೂಪವೆಂದಾಯಿತ್ತು ನೋಡಾ.
ಸತ್ತೇ ಶರಣಲಿಂಗವೆಂದೆ.
ಚಿತ್ತೇ ಶಕ್ತಿಭಕ್ತಿಯೆಂದೆ.
ಆನಂದವೇ ಹಸ್ತ ಮುಖ ಪದಾರ್ಥ ಪ್ರಸಾದವೆಂದೆ.
ಹೀಂಗೆಂಬುವದು ವೇದ ಪ್ರಮಾಣವಲ್ಲ;
ಆಗಮ ಪ್ರಮಾಣವಲ್ಲ; ಸ್ಮೃತಿ ಪ್ರಮಾಣವಲ್ಲ.
ಅದೇನು ಕಾರಣವೆಂದರೆ,
ಇದರಿಂದ ನಾನರಿದುದಿಲ್ಲ.
ಮತ್ತೇತರಿಂದರಿದೆನೆಂದರೆ,
ಶಿವಪ್ರಸನ್ನೇತಿಪ್ರಸಾದದಿಂದರಿದು ಕಣ್ದೆರೆದು,
ಸಚ್ಚಿದಾನಂದ ನಿತ್ಯ ಪರಿಪೂರ್ಣ
ಪರಶಿವತತ್ವ ಸ್ವರೂಪವೇ
ಶರಣನೆಂಬ ವಾಕ್ಯ ಸತ್ಯ ನೋಡಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Nirākāra paravastu tānē
sadrūpu cidrūpu ānanda
svarūpavendāyittu nōḍā.
Sattē śaraṇaliṅgavende.
Cittē śaktibhaktiyende.
Ānandavē hasta mukha padārtha prasādavende.
Hīṅgembuvadu vēda pramāṇavalla;
āgama pramāṇavalla; smr̥ti pramāṇavalla.
Adēnu kāraṇavendare,
idarinda nānaridudilla.
Mattētarindaridenendare,
śivaprasannētiprasādadindaridu kaṇderedu,
saccidānanda nitya paripūrṇa
paraśivatatva svarūpavē
śaraṇanemba vākya satya nōḍayyā,
mahāliṅgaguru śivasid'dhēśvara prabhuvē.