ನನ್ನಿಂದರಿದೆನೆಂಬೆನೆ ನನ್ನಿಂದರಿದವನಲ್ಲ.
ನಿನ್ನಿಂದರಿದೆನೆಂಬೆನೆ ನಿನ್ನಿಂದರಿದವನಲ್ಲ.
ಅದೇನು ಕಾರಣವೆಂದಡೆ,
ಕಣ್ಣ ಬೆಳಗು ಸೂರ್ಯನ ಬೆಳಗು ಕೂಡಿ ಕಾಂಬಂತೆ,
ನನ್ನ ನಿನ್ನರಿವಿನ ಸಂಬಂಧದ
ಬೆಂಬಳಿಯಲ್ಲಿ ಅರಿದೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration Nannindaridenembene nannindaridavanalla.
Ninnindaridenembene ninnindaridavanalla.
Adēnu kāraṇavendaḍe,
kaṇṇa beḷagu sūryana beḷagu kūḍi kāmbante,
nanna ninnarivina sambandhada
bembaḷiyalli aridenu kāṇā,
nijaguru svatantrasid'dhaliṅgēśvara.