•  
  •  
  •  
  •  
Index   ವಚನ - 22    Search  
 
ಅರ್ಥದಲ್ಲೇನೂ ಸುಖವಿಲ್ಲ. ಅರ್ಥವಗಳಿಸಿ ಆತ್ಮಪುತ್ರರ್ಗಿರಿಸಬೇಡ. ಆರಿಗಾರೂ ಇಲ್ಲ. ಶಿವನಲ್ಲದೆ ಹಿತವರಿಲ್ಲವೆಂದರಿದು, ಶಿವನೊಡವೆಯ ಶಿವನವರಿಗೆ ಕೊಡು ಮರುಳೆ. ಅರ್ಥದಲ್ಲೇನೂ ಸುಖವಿಲ್ಲ. ಅರ್ಥವನಾರ್ಜಿಸುವಲ್ಲಿ ದುಃಖ. ಅರ್ಜಿಸಿದ ಧನವ ರಕ್ಷಿಸುವಲ್ಲಿ ದುಃಖ. ನಾಶವಾದಡೆ ದುಃಖ, ವೆಚ್ಚವಾದಡೆ ದುಃಖ. ಈ ಪರಿಯಲ್ಲಿ ಅರ್ಥದಿಂದ ಸದಾ ದುಃಖವಡೆವವರಿಗೆ ಸುಖವಿಲ್ಲೆಂದರಿಯದೆ, ಧನದರ್ಥದ ಮರವೆಯಲ್ಲಿ ಬಳಲುತ್ತಿಹ, ಮನುಜರಿಗಿನ್ನಾವ ಗತಿಯಿ ಇಲ್ಲವಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
Transliteration Arthadallēnū sukhavilla. Arthavagaḷisi ātmaputrargirisabēḍa. Ārigārū illa. Śivanallade hitavarillavendaridu, śivanoḍaveya śivanavarige koḍu maruḷe. Arthadallēnū sukhavilla. Arthavanārjisuvalli duḥkha. Arjisida dhanava rakṣisuvalli duḥkha. Nāśavādaḍe duḥkha, veccavādaḍe duḥkha. Ī pariyalli arthadinda sadā duḥkhavaḍevavarige sukhavillendariyade, dhanadarthada maraveyalli baḷaluttiha, manujariginnāva gatiyillavayya, nijaguru svatantrasid'dhaliṅgēśvarā.