•  
  •  
  •  
  •  
Index   ವಚನ - 27    Search  
 
ಜಗದಗಲದ ಮಾಯಾಜಾಲವ ಹಿಡಿದು ಕಾಲನೆಂಬ ಜಾಲಗಾರ ಮಾಯಾ ಜಾಲವ ಬೀಸಿದ ನೋಡಯ್ಯ. ಆ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ. ಬಲ್ಲಬಲ್ಲಿದರೆಂಬುವರೆಲ್ಲರ ಬಲೆಯ ಕಲ್ಲಿಯೊಳಗೆ ತುಂಬಿದ ಕಾಲ. ಆ ಕಾಲನ ಬಲೆಯೊಳಗೆ ಸಿಕ್ಕಿ ಬೀಳುವೆಗೊಳುತಿದೆ ಜಗವೆಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ತನ್ನವರಿಗೆ ತಾ ಮೇಲಾರೈಕೆಯಾಗಿಹನು.
Transliteration Jagadagalada māyājālava hiḍidu kālanemba jālagāra jālava bīsida nōḍayya. Ā jālakke horagādavaranobbaranū kāṇe. Ballaballidarembuvarellara baleya kalliyoḷage tumbida kāla. Ā kālana baleyoḷage sikki bīḷuvegoḷutide jagavella. Nijaguru svatantrasid'dhaliṅgēśvaranu, tannavarige tā mēlāraikeyāgihanu.