•  
  •  
  •  
  •  
Index   ವಚನ - 54    Search  
 
ತತ್ತಿಯೊಳಗಣ ಪಕ್ಷಿಯಂತೆ, ಎತ್ತಲೆಂದರಿಯದೆ ಅಜ್ಞಾನದ ಕತ್ತಲೆಯೊಳಗೆ ಸಿಕ್ಕಿ ದುಃಖಗೊಳುತ್ತಿಹರೆಲ್ಲರು. ದಿವಾ ರಾತ್ರಿ ಇಂತು ದುಃಖವನನುಭವಿಸುತ್ತ, ಕಾಯುವ ಹೊತ್ತು ಬಳಲುವ ಜೀವರುಗಳು, ತಾವಾರೆಂದರಿಯದೆ ನೋವುತ್ತ ಬೇವುತ್ತ ಸಾವುತ್ತಿರ್ಪರವರಿಗಿನ್ನೆಂದಿಂಗೆ ಮುಕ್ತಿಯಹುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?.
Transliteration Tattiyoḷagaṇa pakṣiyante, ettalendariyade ajñānada kattaleyoḷage sikki duḥkhagoḷuttiharellaru. Divā rātri intu duḥkhavananubhavisutta, kāyuva hottu baḷaluva jīvarugaḷu, tāvārendariyade nōvutta bēvutta sāvuttirparavariginnendiṅge muktiyahudu, nijaguru svatantrasid'dhaliṅgēśvara?.