ತಟಿದಂಕುರದಂತೆ ಕ್ಷಣದಲ್ಲಿ ತೋರಿಯಡಗುವ ಸಂಸಾರ.
ಇದರಲ್ಲೇನು ಲೇಸ ಕಂಡು,
ನಿತ್ಯಾನಂದ ಚಿದಾತ್ಮಸುಖವ ಬಿಡುವೆ?
ಈ ಸಂಸಾರ ಸ್ಥಿರವಲ್ಲ.
ಬೇಗ ಗುರು ಚರಣವ ದೃಢವಿಡಿ.
ಕಾಬೆ, ಮುಂದೆ ನೀನು ಕೈವಲ್ಯವ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಾಹ ಸೌಖ್ಯವನು.
Transliteration Taṭidaṅkuradante kṣaṇadalli tōriyaḍaguva sansāra.
Idarallēnu lēsa kaṇḍu,
nityānanda cidātmasukhava biḍuve?
Ī sansāra sthiravalla.
Bēga guru caraṇava dr̥ḍhaviḍi.
Kābe, munde nīnu kaivalyava,
nijaguru svatantrasid'dhaliṅgēśvaranallondāha saukhyavanu.