ನಿರಾಳದಿಂದ ಸಹಜವಾಯಿತ್ತು.
ಸಹಜದಿಂದ ಸೃಷ್ಟಿಯಾಯಿತ್ತು.
ಸೃಷ್ಟಿಯಿಂದ ಸಂಸಾರವಾಯಿತ್ತು.
ಸಂಸಾರದಿಂದ ಅಜ್ಞಾನವಾಯಿತ್ತು.
ಅಜ್ಞಾನದಿಂದ ಬಳಲುವ ಜೀವರ,
ಬಳಲಿಕೆಯ ತೊಲಗಿಸಲು ಜ್ಞಾನವಾಯಿತ್ತು.
ಜ್ಞಾನದಿಂದಲಾಯಿತ್ತು ಗುರುಕರುಣ.
ಗುರುಕರುಣದಿಂದಲಾಯಿತ್ತು ಸುಮನ.
ಸುಮನದಿಂದಲಾಯಿತ್ತು ಶಿವಧ್ಯಾನ.
ಶಿವಧ್ಯಾನದಿಂದಲಾಯಿತ್ತು ನಿರ್ದೇಹ.
ನಿರ್ದೇಹದಿಂದಲಾಯಿತ್ತು ಸಾಯುಜ್ಯ.
ಸಾಯುಜ್ಯದಿಂದಲಾಯಿತ್ತು ಸರ್ವಶೂನ್ಯ.
ಆ ಸರ್ವಶೂನ್ಯದಲ್ಲೊಡಗೂಡಿ ನಿಂದಾತಂಗೆ,
ಮರಳಿ ಜನ್ಮ ಉಂಟೆ ಹೇಳಾ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration Nirāḷadinda sahajavāyittu.
Sahajadinda sr̥ṣṭiyāyittu.
Sr̥ṣṭiyinda sansāravāyittu.
Sansāradinda ajñānavāyittu.
Ajñānadinda baḷaluva jīvara,
baḷalikeya tolagisalu jñānavāyittu.
Jñānadindalāyittu gurukaruṇa.
Gurukaruṇadindalāyittu sumana.
Sumanadindalāyittu śivadhyāna.
Śivadhyānadindalāyittu nirdēha.
Nirdēhadindalāyittu sāyujya.
Sāyujyadindalāyittu sarvaśūn'ya.
Ā sarvaśūn'yadalloḍagūḍi nindātaṅge,
maraḷi janma uṇṭe hēḷā?
Nijaguru svatantrasid'dhaliṅgēśvara.