•  
  •  
  •  
  •  
Index   ವಚನ - 115    Search  
 
ಕಾಯದ ಕಳವಳವ ಗೆಲಲರಿಯದವರು, ಮಾಯಾಪಾಶದಲ್ಲಿ ಬಂಧವಡೆದ ಸಂಸಾರಿಗಳಹರಲ್ಲದೆ ಅವರು ಜ್ಞಾನಿಗಳಾಗಲರಿಯರು. ಅವರಿಗಿನ್ನೆಂದಿಂಗೆ ಮುಕ್ತಿಯಹುದೊ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?.
Transliteration Kāyada kaḷavaḷava gelalariyadavaru, māyāpāśadalli bandhavaḍeda sansārigaḷaharallade avaru jñānigaḷāgalariyaru. Avariginnendiṅge muktiyahudo nijaguru svatantrasid'dhaliṅgēśvara?.