ಹೊತ್ತುಳ್ಳಲ್ಲಿ ಅಗ್ಘವಣಿ ಪತ್ರೆ ಪುಷ್ಪವ ತಂದು,
ಅರ್ಥಿಯಲ್ಲಿ ಶಿವಲಿಂಗಪೂಜೆಯ ಮಾಡಲು,
ಎತ್ತಿದ ಮಣಿಮಕುಟದ ಮೊತ್ತದ ಗಣಂಗಳ ನಡುವೆ,
ಮೃತ್ಯುಂಜಯನೊಯ್ದಿರಿಸುವನವರ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration Hottuḷḷalli agghavaṇi patre puṣpava tandu,
arthiyalli śivaliṅgapūjeya māḍalu,
ettida maṇimakuṭada mottada gaṇaṅgaḷa naḍuve,
mr̥tyun̄jayanoydirisuvanavara,
nam'ma nijaguru svatantrasid'dhaliṅgēśvara.