ಶಿವಭಕ್ತರಾದವರು, ಅಂಗದ ಮೇಲಣ ಲಿಂಗಕ್ಕೆ,
ಅನ್ನ ಉದಕ ಗಂಧ ಪುಷ್ಪ ತಾಂಬೂಲ ವಸ್ತ್ರ
ಮೊದಲಾದವ ಕೊಟ್ಟು ಕೊಳಲೇಬೇಕು.
'ರುದ್ರಭುಕ್ತಾನ್ನಂ ಭಕ್ಷಯೇತ್ ರುದ್ರಪೀತಂ ಜಲಂ ಪಿಬೇತ್
ರುದ್ರಾಘ್ರಾತಂ ಸದಾ ಜಿಘ್ರೇತ್' -ಎಂದುದಾಗಿ,
ಶಿವಂಗೆ ಕೊಡದೆ ಕೊಂಡದೆ ಅದು ಭಕ್ತಿಪಥವಲ್ಲ.
ಆತಂಗೆ ಪ್ರಸಾದವಿಲ್ಲ.
ವಿಶ್ವಾಸವಿಲ್ಲದವರ ಶಿವನೊಲ್ಲನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration Śivabhaktarādavaru, aṅgada mēlaṇa liṅgakke,
anna udaka gandha puṣpa tāmbūla vastra
modalādava koṭṭu koḷalēbēku.
'Rudrabhuktānnaṁ bhakṣayēt rudrapītaṁ jalaṁ pibēt
rudrāghrātaṁ sadā jighrēt' -endudāgi,
śivaṅge koḍade koṇḍade adu bhaktipathavalla.
Ātaṅge prasādavilla.
Viśvāsavilladavara śivanollanayyā,
nijaguru svatantrasid'dhaliṅgēśvara.