•  
  •  
  •  
  •  
Index   ವಚನ - 165    Search  
 
ಇಬ್ಬರು ಮೂವರು ದೇವರೆಂದು ತಬ್ಬಿಬ್ಬುಗೊಂಡು ನುಡಿಯಬೇಡ. ಒಬ್ಬನೇ ದೇವ ಕಾಣಿರಣ್ಣ. "ಸರ್ವಸ್ಮಾದಧಿಕೋರುದ್ರಃ ಪರಮಾತ್ಮಾ ಸದಾಶಿವಃ ಇತಿ ಯತ್ಮ ನಿಶ್ಚಿತಾ ಧೀಃ ಸವೈ ಮಾಹೇಶ್ವರಃ ಸ್ಮೃತಃ||" ಎಂದವಾಗಮಂಗಳು. `ಶಿವನೇಕೋ ದೇವ'ನೆಂದು ಸಾರುತ್ತಿವೆ ಶ್ರುತಿ ಪುರಾಣಂಗಳು. ಇದು ಕಾರಣ, ಶಿವನಲ್ಲದೆ ದೈವವಿಲ್ಲೆಂದರಿದ ಮಾಹೇಶ್ವರನ ಹೃದಯ ನಿವಾಸವಾಗಿಪ್ಪ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
Transliteration Ibbaru mūvaru dēvarendu tabbibbugoṇḍu nuḍiyabēḍa. Obbanē dēva kāṇiraṇṇa. Sarvasmādadhikōrudraḥ paramātmā sadāśivaḥ iti yatma niścitā dhīḥ savai māhēśvaraḥ smr̥taḥ|| endavāgamaṅgaḷu. `Śivanēkō dēva'nendu sāruttive śruti purāṇaṅgaḷu. Idu kāraṇa, śivanallade daivavillendarida māhēśvarana hr̥daya nivāsavāgippa, nam'ma nijaguru svatantrasid'dhaliṅgēśvaranu.