ಬ್ರಹ್ಮಾದಿ ದೇವತೆಗಳೇನು ಮುಕ್ತಿ ದಾನಶೀಲರೇ? ಅಲ್ಲ.
ಮಾಯಾಪಾಶದಲ್ಲಿ ಬದ್ಧರಾದವರೆಲ್ಲ ಮುಕ್ತಿ ದಾನಶೀಲರಹರೆ?
ಮುಕ್ತಿ ದಾನಶೀಲ ಶಿವನೊಬ್ಬನಲ್ಲದಿಲ್ಲವೆಂದು
ನಂಬಿ ದೃಢವಿಡಿವುದು
ಹಲವ ಹಂಬಲಿಸಿ ಬಳಲಲೇಕೆ?.
ಶ್ರೀಗುರುವಚನವ ತಿಳಿದು ನೋಡಿ ನೆನೆದು ಸುಖಿಯಹುದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಮುಕ್ತಿ ದಾನಶೀಲನ.
Transliteration Brahmādi dēvategaḷēnu mukti dānaśīlarē? Alla.
Māyāpāśadalli bad'dharādavarella mukti dānaśīlarahare?
Mukti dānaśīla śivanobbanalladillavendu
nambi dr̥ḍhaviḍivudu
halava hambalisi baḷalalēke?.
Śrīguruvacanava tiḷidu nōḍi nenedu sukhiyahudu,
nijaguru svatantrasid'dhaliṅgēśvaranemba mukti dānaśīlana.