•  
  •  
  •  
  •  
Index   ವಚನ - 198    Search  
 
ಶಿವಜ್ಞಾನೋದಯವಾದ ಭಕ್ತನ ಪೂರ್ವಾಶ್ರಯವಳಿದು ಭಕ್ತನಾಗಬೇಕೆಂಬಿರಿ. ಭವಿಗೆ ಪೂರ್ವಾಶ್ರಯವಲ್ಲದೆ ಭಕ್ತಂಗೆ ಪೂರ್ವಾಶ್ರಯವುಂಟೇ? ಇಲ್ಲವಾಗಿ. "ಅಜ್ಞಾನಂ ಪೂರ್ವಮಿತ್ಯಾಹುರ್ಭವೋSನಾದಿಸ್ಥಲಾಶ್ರಯಃ| ಸರ್ವಂ ನಿರಸಿತವ್ಯಂ ಚ ಪ್ರಯತ್ನೇನ ವಿಪಶ್ವಿತಾ" ಎಂದುದಾಗಿ, ಮಲ ಮಾಯಾ ಸಂಸಾರದಲ್ಲಿ ಮರಳಿ ಮರಳಿ ಬಪ್ಪಾತನೆ ಭವಿ. ಸಂಸಾರವಳಿದು, ನಿಜವುಳಿದು ಗುರು ಲಿಂಗ ಜಂಗಮಕ್ಕೆ ಮಾಡುವ ಭಕ್ತಂಗೆ ಭವವಿಲ್ಲ. ಆತನು ಜೀವನ್ಮುಕ್ತನಾಗಿಹನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration Śivajñānōdayavāda bhaktana pūrvāśrayavaḷidu bhaktanāgabēkembiri. Bhavige pūrvāśrayavallade bhaktaṅge pūrvāśrayavuṇṭē? Illavāgi. Ajñānaṁ pūrvamityāhurbhavōSnādisthalāśrayaḥ| sarvaṁ nirasitavyaṁ ca prayatnēna vipaśvitā endudāgi, mala māyā sansāradalli maraḷi maraḷi bappātane bhavi. Sansāravaḷidu, nijavuḷidu guru liṅga jaṅgamakke māḍuva bhaktaṅge bhavavilla. Ātanu jīvanmuktanāgihanu kāṇā, nijaguru svatantrasid'dhaliṅgēśvara.