ನಾ ಬಲ್ಲೆ ತಾಬಲ್ಲೆನೆಂಬುವರೆಲ್ಲ
ಅಲ್ಲ ಅಹುದೆಂಬ ಗೆಲ್ಲ ಸೋಲದ ಮಾತ ಕಲಿತು ಆಡುವರಲ್ಲದೆ
ಅದನಾರು ಮೆಚ್ಚುವರು?
ಕಾಲೂರಿ ಒಂದೆರಡು ಯೋಜನ ನಡೆಯಬಹುದಲ್ಲದೆ
ತಲೆಯೂರಿ ನಡೆಯಬಹುದೆ?
ನೆಲೆಯರಿಯದ ಮಾತ ಹಲವ ನುಡಿದಡೇನು ಫಲ?
ನೆಲಯರಿದ ಮಾತೊಂದೆ ಸಾಲದೆ?
ಹಲವು ದೇವರೆಂದು ಹೊಲಬುಗೆಟ್ಟು ನುಡಿವರು.
ಕುಲಸ್ವಾಮಿ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಬ್ಬನೆ
ದೇವರೆಂದರಿದೆಡೆ ಸಾಲದೆ?
Transliteration Nā balle tāballenembuvarella
alla ahudemba gella sōlada māta kalitu āḍuvarallade
adanāru meccuvaru?
Kālūri onderaḍu yōjana naḍeyabahudallade
taleyūri naḍeyabahude?
Neleyariyada māta halava nuḍidaḍēnu phala?
Nelayarida mātonde sālade?
Halavu dēvarendu holabugeṭṭu nuḍivaru.
Kulasvāmi nam'ma nijaguru svatantrasid'dhaliṅgēśvaranobbane
dēvarendarideḍe sālade?