ಹಲವು ತೃಣ ಕಾಷ್ಠಗಳಲ್ಲಿ ಅಗ್ನಿ ಬೆರಸಿದಿರ್ದಂತೆ,
ಹಲವು ಘಟಜಲದಲ್ಲಿ ಸೂರ್ಯ ಬಿಂಬಿಸುತ್ತಿರ್ದಂತೆ,
ಇಪ್ಪನಯ್ಯ ಶಿವನು ಸಕಲ ಜೀವರ ಹೃದಯದಲ್ಲಿ.
ಬೆರಸಿಯೂ ಬೆರಸದಂತಿಪ್ಪನಯ್ಯಾ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
Transliteration Halavu tr̥ṇa kāṣṭhagaḷalli agni berasidirdante,
halavu ghaṭajaladalli sūrya bimbisuttirdante,
ippanayya śivanu sakala jīvara hr̥dayadalli.
Berasiyū berasadantippanayyā,
nam'ma nijaguru svatantrasid'dhaliṅgēśvaranu.