•  
  •  
  •  
  •  
Index   ವಚನ - 254    Search  
 
ಕಾಯದ ಸ್ಥಿತಿಗತಿಯನರಿದು, ಕಾಯವ ಶೋಧಿಸಿ ಮುಂದೆ ಸಾಧಿಸಿಕೊಳ್ಳಿರಣ್ಣ. ದೇಹಮಧ್ಯದಾಧಾರಪರ ಪ್ರಕೃತಿಯಲ್ಲಿ ಪ್ರಾಣವಾಯು ಹುಟ್ಟಿ, ಅಲ್ಲಿಂದ ಲಂಬಿಕಾಸ್ಥಾನವ ತಾಗಿ, ಸಕಾರಾಂತವಾಗಿ ನಿವೃತ್ತಿ ಪ್ರವೃತ್ತಿಯಾಗಿ ಚರಿಸುವುದು. ಅಲ್ಲಿ ಇಪ್ಪತ್ತೊಂದುಸಾವಿರದ ಆರುನೂರು ಜೀವಜಪವ ಜಪಿಸುವುದು, ಗುರೂಪದೇಶದಿಂದರಿದಡೆ ಅಂತ್ಯವಾದಿಯಾಗಿ ಆದಿಯಂತ್ಯವಾಗಿ ಆ ಜಪವು ದಹರಾಕಾಶದ ನಾದಾತ್ಮ ಲಿಂಗದಲ್ಲಿ ಕೂಡುವುದೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಮಂತ್ರಯೋಗವು.
Transliteration Kāyada sthitigatiyanaridu, kāyava śōdhisi munde sādhisikoḷḷiraṇṇa. Dēhamadhyadādhārapara prakr̥tiyalli prāṇavāyu huṭṭi, allinda lambikāsthānava tāgi, sakārāntavāgi nivr̥tti pravr̥ttiyāgi carisuvudu. Alli ippattondusāvirada ārunūru jīvajapava japisuvudu, gurūpadēśadindaridaḍe antyavādiyāgi ādiyantyavāgi ā japavu daharākāśada nādātma liṅgadalli kūḍuvudē nijaguru svatantrasid'dhaliṅgēśvaranalli mantrayōgavu.