•  
  •  
  •  
  •  
Index   ವಚನ - 273    Search  
 
ಊರ ಮೇಗಡೆಯಲೊಂದು ನರಿ ಕೂಗಿಡಲು ಹರಡಿದ್ದವರೆಲ್ಲ ನೆರೆದು, ಇದೆಲ್ಲಿಯ ಕೂಗೆಂದು ವಿಚಾರಿಸಹೋದರೆ, ನೆರೆದವರನೆಲ್ಲರ ನರಿ ನುಂಗಲು, ಊರು ಹಾಳಾಯಿತ್ತು. ಹಾಳೂರೊಳಗಿದ್ದರಸು, ಪರಿವಾರವನರಸಲೆಂದು ಹೋದರೆ, ಆ ಅರಸನ ನುಂಗಿತ್ತು. ಆ ಅರಸನ ವಾಹನವ ನುಂಗಿ, ತನಗಾರೂ ಸರಿಯಿಲ್ಲವೆಂದು ಮೂರು ಮೊನೆಯ ಗಿರಿಯನೇರಿ ಬಟ್ಟಬಯಲಾಯಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
Transliteration Ūra mēgaḍeyalondu nari kūgiḍalu haraḍiddavarella neredu, idelliya kūgendu vicārisahōdare, neredavaranellara nari nuṅgalu, ūru hāḷāyittu. Hāḷūroḷagiddarasu, parivāravanarasalendu hōdare, ā arasana nuṅgittu. Ā arasana vāhanava nuṅgi, tanagārū sariyillavendu mūru moneya giriyanēri baṭṭabayalāyittu, nijaguru svatantrasid'dhaliṅgēśvara.