ಮೂಲಮಂತ್ರಾತ್ಮಸ್ವರೂಪದಿಂದ ಸಹಸ್ರಾದಿತ್ಯ
ತೇಜೋರೂಪಾಗಿ ಬೆಳಗುತ್ತಿಹ
ದೇವರದೇವನಾದ ಮಹಾದೇವನ, ಅನಂತ ಶಕ್ತಿವಂತನ,
ವಿಶ್ವಾತ್ಮನಾದ ನಾದಾತ್ಮ ಶಿವನ,
ಸದಾ ಸರ್ವಾಂಗವು ಕರ್ಣಂಗಳಾಗಿ ಕೇಳಿ ಕೇಳಿ, ಮನ ಮಚ್ಚಿ
ಆ ಪರಮಜ್ಞಾನಾನಂದರೂಪನ ನೆನೆನೆನೆದು,
ಮರಳಿ ಮರಳಿ ಸರ್ವಾಂಗದಲ್ಲಿ ಸೋಂಕಿ ಸೋಂಕಿ,
ಎನ್ನ ಕರಣೇಂದ್ರಿಯಗಳೆಲ್ಲವು ಲಿಂಗಾಕಾರವಾಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಳಗಡಗಿದವು.
Transliteration Mūlamantrātmasvarūpadinda sahasrāditya
tējōrūpāgi beḷaguttiha
dēvaradēvanāda mahādēvana, ananta śaktivantana,
viśvātmanāda nādātma śivana,
sadā sarvāṅgavu karṇaṅgaḷāgi kēḷi kēḷi, mana macci
ā paramajñānānandarūpana nenenenedu,
maraḷi maraḷi sarvāṅgadalli sōṅki sōṅki,
enna karaṇēndriyagaḷellavu liṅgākāravāgi,
nijaguru svatantrasid'dhaliṅgēśvaranoḷagaḍagidavu.