ಭಾವಿಸಬಾರದ ಪ್ರಸಾದವ ರೂಹಿಸಬಾರದು.
ರೂಹಿಸಬಾರದ ಪ್ರಸಾದವ ಸಾಧಿಸಬಾರದು.
ಸಾಧಿಸಬಾರದ ಪ್ರಸಾದವ ಸಾಧಿಸಿ ಕಂಡೆಹೆನೆಂದು
ನರ ಸುರ ಮನು ಮುನಿಗಳು, ಜಪ ತಪ
ಹೋಮ ನಿತ್ಯನೇಮಂಗಳಿಂದರಸಿ
ತೊಳಲಿ ಬಳಲುತ್ತಿದ್ದರಲ್ಲ!
ಕಾಯವಂತರೆಲ್ಲರೂ ಕಳವಳಿಸುತ್ತಿದ್ದರು.
ಆ ಮಹಾಪ್ರಸಾದವು ಮುನ್ನಾದಿಯ-
ಶರಣಂಗಲ್ಲದೆ ಸಾಧ್ಯವಾಗದು.
ಇದು ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ
ಮಹಾಪ್ರಸಾದವು,
ಮಹಾಪ್ರಸಾದಿಗೆ ಸಾಧ್ಯ, ಉಳಿದವರಿಗಸಾಧ್ಯವು.
Transliteration (Vachana in Roman Script) Bhāvisabārada prasādava rūhisabāradu.
Rūhisabārada prasādava sādhisabāradu.
Sādhisabārada prasādava sādhisi kaṇḍ'̔ehenendu
nara sura manu munigaḷu, japa tapa
hōma nityanēmaṅgaḷindarasi
toḷali baḷaluttiddaralla!
Kāyavantarellarū kaḷavaḷisuttiddaru.
Ā mahāprasādavu munnādiya-
śaraṇaṅgallade sādhyavāgadu.
Idu kāraṇa, nijaguru svatantrasid'dhaliṅgēśvaranemba
mahāprasādavu,
mahāprasādige sādhya, uḷidavarigasādhyavu.
Read More