ಕಾಬುದೊಂದು ಜ್ಞಾನ, ಕಾಣಿಸಿಕೊಂಬುದೊಂದು
ಜ್ಞೇಯವೆಂದು ವಿವರಿಸಿ ನುಡಿಯಬಹುದೆ?
ಇಂದು ಭಾನು ದೀಪಂಗಳು
ತಮ್ಮ ಬೆಳಗಿನಿಂದ ತಮ್ಮನರುಹಿಸಿಕೊಂಬಂತೆ
ಜ್ಞಾನ ಜ್ಞೇಯಂಗಳ ಪರಿಯೆಂದರಿದಾತನರಿವು.
"ನಿಜ ಅಖಂಡಾನಂದ ಸಂವಿತ್ ಸ್ವರೂಪಂ ಬ್ರಹ್ಮ ಕೇವಲಂ"
ಎಂದುದಾಗಿ,
ಲಿಂಗಾಂಗ ಸಂಬಂಧ ಸಕೀಲವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಬಲ್ಲ.
Transliteration Kābudondu jñāna, kāṇisikombudondu
jñēyavendu vivarisi nuḍiyabahude?
Indu bhānu dīpaṅgaḷu
tam'ma beḷagininda tam'manaruhisikombante
jñāna jñēyaṅgaḷa pariyendaridātanarivu.
Nija akhaṇḍānanda sanvit svarūpaṁ brahma kēvalaṁ
endudāgi,
liṅgāṅga sambandha sakīlavanu,
nijaguru svatantrasid'dhaliṅgēśvarana śaraṇa balla.