ತನು ಮನ ಪ್ರಾಣವ ಲಿಂಗಕ್ಕರ್ಪಿಸಿ ತಾನೆ
ಲಿಂಗದೊಳಗಡಗಿದ ಪ್ರಸಾದಿ.
ಪ್ರಸಾದಿಯೊಳಗೆ ಲಿಂಗವಡಗಿ,
ಪ್ರಸಾದವೇ ತಾನಾದ ಪ್ರಸಾದಿಗೆ
ಪರಮಪ್ರಸಾದಿಯೆಂಬುದು ಕರತಳಾಮಳಕದಂತೆ
ತೋರುತ್ತಿಹುದಾಗಿ
ಶಿವ ಶಿವಾ, ಪ್ರಸಾದಿಯ
ಘನವನೇನೆಂದುಪಮಿಸಬಹುದು?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನೀನೆ ಬಲ್ಲೆ, ನಾನರಿಯೆನು.
Transliteration Tanu mana prāṇava liṅgakkarpisi tāne
liṅgadoḷagaḍagida prasādi.
Prasādiyoḷage liṅgavaḍagi,
prasādavē tānāda prasādige
paramaprasādiyembudu karataḷāmaḷakadante
tōruttihudāgi
śiva śivā, prasādiya
ghanavanēnendupamisabahudu?
Nijaguru svatantrasid'dhaliṅgēśvarā,
nīne balle, nānariyenu.