ಹದಿನಾಲ್ಕು ಭುವನದಲ್ಲಿ ಮನೋವೇದ್ಯವಾಗಿ,
ಅಲ್ಲಿಂದತ್ತತ್ತ ಮೀರಿದ ಘನದಲ್ಲಿ ಕೂಡಿದ ಶಿವಯೋಗಿಗೆ
ಪ್ರಳಯವಿಲ್ಲ.
ಅದೇನು ಕಾರಣವೆಂದಡೆ:
ಆತನರಿವು ಅಖಂಡವಾಗಿ ಬೆಳಗುತ್ತಿರುವ ಕಾರಣ.
ಜಲಾಗ್ನಿ ಪ್ರಳಯಂಗಳಾದಡೂ
ಮರುತಾದಿತ್ಯರ ಪ್ರಳಯಂಗಳಾದಡೂ
ಶಿವನ ನೆನಹಿಂದ ಮನವು ಶಿವಮಯವಾಗಿ
ಮನವಿಲ್ಲದ ಮುಕ್ತಂಗೆ ಕೇಡು ಮುನ್ನಿಲ್ಲ
ಆತ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ,
ನಿತ್ಯನಾಗಿಹನು.
Transliteration Hadinālku bhuvanadalli manōvēdyavāgi,
allindattatta mīrida ghanadalli kūḍida śivayōgige
praḷayavilla.
Adēnu kāraṇavendaḍe:
Ātanarivu akhaṇḍavāgi beḷaguttiruva kāraṇa.
Jalāgni praḷayaṅgaḷādaḍū
marutādityara praḷayaṅgaḷādaḍū
śivana nenahinda manavu śivamayavāgi
manavillada muktaṅge kēḍu munnilla
āta, nijaguru svatantrasid'dhaliṅgēśvarana kūḍi,
nityanāgihanu.