ಶರಣಮಧ್ಯಲಿಂಗ, ಲಿಂಗ ಮಧ್ಯಶರಣನಾದ ಮತ್ತೆ,
ಇನ್ನು ಪರವೆಂದು ಅಪರವೆಂದು
ಪ್ರತಿಯಿಡುವ ಜ್ಞಾನವುಂಟೇ ಹೇಳಾ?
ಅಹಂಭಾವ ಶೂನ್ಯವಾಗಿ ಭಾವಾಭಾವಲಯವಾದ ಮತ್ತೆ
ಇನ್ನು ಭಾವಿಸಲೇನುಂಟುಹೇಳಾ,
ಸಮ್ಯಗ್‍ಜ್ಞಾನಿಯಾದ ಮಹಾತ್ಮ ನಿರ್ಲೇಪಕಂಗೆ?
ಕಾಯ ಕಾರಣವೆಂಬುವೆಲ್ಲ ಶೂನ್ಯವಾದವು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಲಿಂಗೈಕ್ಯಂಗೆ.
Transliteration Śaraṇamadhyaliṅga, liṅga madhyaśaraṇanāda matte,
innu paravendu aparavendu
pratiyiḍuva jñānavuṇṭē hēḷā?
Ahambhāva śūn'yavāgi bhāvābhāvalayavāda matte
innu bhāvisalēnuṇṭuhēḷā,
samyagjñāniyāda mahātma nirlēpakaṅge?
Kāya kāraṇavembuvella śūn'yavādavu,
nijaguru svatantrasid'dhaliṅgēśvarana liṅgaikyaṅge.