•  
  •  
  •  
  •  
Index   ವಚನ - 4    Search  
 
ಹರಿಹರ ಬ್ರಹ್ಮಾದಿಗಳು ಸರಿಯಿಲ್ಲವೆಂದು ಹೇಳುವ ಅಣ್ಣಗಳು ನೀವು ಕೇಳಿರೊ. ಹರಿಹರ ಬ್ರಹ್ಮಾದಿಗಳೊಳಗೆ ಸರಿಯಾಗಿ ಬಂದು, ನಿಮ್ಮ ಅಂತರಂಗದೊಳಗೆ ನಿಂತ ಕಾರಣದಿಂದಾಗಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಸ್ವರ್ಗ ಮರ್ತ್ಯ ಪಾತಾಳ ಈರೇಳು ಭುವನ ಹದಿನಾಲ್ಕು ಲೋಕ, ನಾಲ್ಕು ವರ್ಣ, ಹದಿನೆಂಟು ಜಾತಿ, ನೂರೊಂದು ಕುಲದವರಾದರು. ಭಕ್ತರ ಆಧಾರದಲಿ ನಾವು ಆದಿವಿ, ನೀವು ಆದಿರಿ. ಅದು ಎಂತೆಂದರೆ: ಓಂಕಾರ ಪರಬ್ರಹ್ಮನೆಂಬ ವಿಪ್ರನ ಗರ್ಭದಲ್ಲಿ ಹುಟ್ಟಿದ ನಕಾರ ಬ್ರಹ್ಮನೆ ಪೃಥ್ವಿತತ್ವವಾದ, ಮಕಾರ ವಿಷ್ಣುವೆ ಅಪ್ಪುತತ್ವವಾದ. ಶಿಕಾರ ರುದ್ರನೆ ತೇಜತತ್ವವಾದ, ವಕಾರ ಈಶ್ವರನೆ ವಾಯುತತ್ವವಾದ. ಯಕಾರ ಸದಾಶಿವನೆ ಆಕಾಶ ತತ್ವವಾದ ಅದು ಎಂತೆಂದರೆ: ನಕಾರ ಬ್ರಹ್ಮ , ಮಕಾರ ವಿಷ್ಣು , ಶಿಕಾರ ರುದ್ರ. ಮೂವರು ತ್ರಿಮೂರ್ತಿಗಳು ಕೂಡಲಿಕೆ ಈಶ್ವರನೆಂಬುದೊಂದು ವಿಪ್ರವರ್ಣವಾಯಿತು ಕಾಣಿರೊ. ಆತನ ಸದ್ಯೋಜಾತಮುಖದಲ್ಲಿ ಬ್ರಾಹ್ಮಣ ಹುಟ್ಟಿದ. ಅವರ ಅಂಗದಲ್ಲಿ ಪ್ರಸಾದಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಸ್ಫಟಿಕ ವರ್ಣದ ಪಟ್ಟಿಕೇಶ್ವರನೆಂಬ ಲಿಂಗವಾದ. ಆತನ ಭುಜದಲ್ಲಿ ಕ್ಷತ್ರಿಯ ಹುಟ್ಟಿದ. ಅವರ ಅಂಗದಲ್ಲಿ ಪ್ರಾಣಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಶ್ವೇತವರ್ಣದ ರಾಮನಾಥಲಿಂಗವಾದ, ಆತನ ಉದರದಲ್ಲಿ ವೈಶ್ಯ ಹುಟ್ಟಿದ ಅವರ ಅಂಗದಲ್ಲಿ ಪ್ರಾಣಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಶ್ಯಾಮವರ್ಣದ ನಗರೇಶ್ವರಲಿಂಗವಾದ. ಆತನ ಪಾದದಲ್ಲಿ ಶೂದ್ರ ಹುಟ್ಟಿದ. ಅವರ ಅಂಗದಲ್ಲಿ ಪ್ರಾಣಲಿಂಗವಾದ ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ನೀಲವರ್ಣದ ಕಲ್ಲಿನಾಥಲಿಂಗವಾದ. ಇಂತೀ ನಾಲ್ಕುವರ್ಣ ಹದಿನೆಂಟುಜಾತಿ ನೂರೊಂದು ಕುಲದವರು ಅಂತರಂಗದ ಒಳಹೊರಗೆ ಹರಿಹರ ಬ್ರಹ್ಮಾದಿಗಳು ಪೂಜೆಗೊಂಬುವ ದೇವರು ತಾವೆ ಆದರು, ಪೂಜೆ ಮಾಡುವ ಭಕ್ತರು ತಾವೆ ಆದರು. ಅದು ಎಂತೆಂದರೆ: ನಿಮ್ಮ ತಾಯಿಗರ್ಭದಲ್ಲಿ ಶುಕ್ಲ ಶೋಣಿತಗಳು ಎರಡು ಕೂಡಿ 'ಅಕ್ಷಮೂರ್ತಿಯಾದ. ಆತ್ಮದೊಳಗೆ ಓಂಕಾರ ಪರಬ್ರಹ್ಮವೆಂಬ ............' ನರರು ಸುರರು ತೆತ್ತೀಸಕೋಟಿ ದೇವತೆಗಳಿಗೆಲ್ಲ ಪೂಜೆ ಮಾಡುವ ಲಿಂಗ ಒಂದೆಯೆಂದು ಇಕ್ಕುವೆನು ಮುಂಡಿಗೆಯ. ಇದನೆತ್ತುವರುಂಟೇನು, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ?
Transliteration Harihara brahmādigaḷu sariyillavendu hēḷuva aṇṇagaḷu nīvu kēḷiro. Harihara brahmādigaḷoḷage sariyāgi bandu, nim'ma antaraṅgadoḷage ninta kāraṇadindāgi, pr̥thvi appu tēja vāyu ākāśa svarga martya pātāḷa īrēḷu bhuvana hadinālku lōka, nālku varṇa, hadineṇṭu jāti, nūrondu kuladavarādaru. Bhaktara ādhāradali nāvu ādivi, nīvu ādiri. Adu entendare: Ōṅkāra parabrahmanemba viprana garbhadalli huṭṭida nakāra brahmane pr̥thvitatvavāda, makāra viṣṇuve apputatvavāda. Śikāra rudrane tējatatvavāda, Vakāra īśvarane vāyutatvavāda. Yakāra sadāśivane ākāśa tatvavāda adu entendare: Nakāra brahma, makāra viṣṇu, śikāra rudra. Mūvaru trimūrtigaḷu kūḍalike īśvaranembudondu vipravarṇavāyitu kāṇiro. Ātana sadyōjātamukhadalli brāhmaṇa huṭṭida. Avara aṅgadalli prasādaliṅgavāda, śikheyalli viṣṇuliṅgavāda, maneyalli sphaṭika varṇada paṭṭikēśvaranemba liṅgavāda. Ātana bhujadalli kṣatriya huṭṭida. Avara aṅgadalli prāṇaliṅgavāda, śikheyalli viṣṇuliṅgavāda, Maneyalli śvētavarṇada rāmanāthaliṅgavāda, ātana udaradalli vaiśya huṭṭida avara aṅgadalli prāṇaliṅgavāda, śikheyalli viṣṇuliṅgavāda, maneyalli śyāmavarṇada nagarēśvaraliṅgavāda. Ātana pādadalli śūdra huṭṭida. Avara aṅgadalli prāṇaliṅgavāda śikheyalli viṣṇuliṅgavāda, maneyalli nīlavarṇada kallināthaliṅgavāda. Intī nālkuvarṇa hadineṇṭujāti nūrondu kuladavaru antaraṅgada oḷahorage harihara brahmādigaḷu pūjegombuva Dēvaru tāve ādaru, pūje māḍuva bhaktaru tāve ādaru. Adu entendare: Nim'ma tāyigarbhadalli śukla śōṇitagaḷu eraḍu kūḍi 'akṣamūrtiyāda. Ātmadoḷage ōṅkāra parabrahmavemba ............' Nararu suraru tettīsakōṭi dēvategaḷigella pūje māḍuva liṅga ondeyendu ikkuvenu muṇḍigeya. Idanettuvaruṇṭēnu, dēvadhvaja mr̥tyun̄jayana bhāvadollabha muddanūrēśā?