ಹೊರವಾರು ಉಭಯಮಾರ್ಗ,
ಒಳವಾರು ಸ್ಥಲಕುಳ ವಿಸಂಚವಿಲ್ಲಾ
ಎಂದು ಕೊಟ್ಟ ಚೀಟು, ನಿಮ್ಮ ಕೈಹಾಳೆಯಲ್ಲಿ ಅದೆ.
ತಡಿಯೊಡೆಯಂಗೆ ಕುರುಹ ತೋರಿ,
ನಿಮ್ಮ ನಿಮ್ಮ ಹೊರೆಯ ಕೊಂಡು ಹೋಗಿ,
ಜಗದ ಸುಂಕದೊಡೆಯ ಬಂಕೇಶ್ವರಲಿಂಗದ ಅರಿಕೆಯಾಗಿ.
Transliteration Horavāru ubhayamārga,
oḷavāru sthalakuḷa visan̄cavillā
endu koṭṭa cīṭu, nim'ma kaihāḷeyalli ade.
Taḍiyoḍeyaṅge kuruha tōri,
nim'ma nim'ma horeya koṇḍu hōgi,
jagada suṅkadoḍeya baṅkēśvaraliṅgada arikeyāgi.