ಎವೆಯ ಮುಚ್ಚಿ,ಕಣ್ಣು ತೆರೆಯಬೇಕು.
ಶರೀರವ ಗೆದ್ದು, ಜ್ಞಾನವನರಿಯಬೇಕು.
ಜ್ಞಾನವ ಮರೆದು, ವಿಜ್ಞಾನ ಸುಜ್ಞಾನದಲ್ಲಿ ನಿಂದು,
ಚಿದ್ಘನದಲ್ಲಿ ಚಿಚ್ಛಕ್ತಿಯ ಕೂಡಿ, ಚಿಚ್ಛಕ್ತಿ ನಷ್ಟವಾಗಿ ವಸ್ತುಲೇಪ.
ದೃಕ್ಕಿಂಗೆ ಅಗೋಚರವಾಗಿ,
ತತ್ವಮಸಿಯೆಂಬ ಭಿತ್ತಿಯ ಭಾವವಿತ್ತಲೆ,
ಅತ್ತಲರಿ, ಬಂಕೇಶ್ವರಲಿಂಗವ.
Transliteration Eveya mucci,kaṇṇu tereyabēku.
Śarīrava geddu, jñānavanariyabēku.
Jñānava maredu, vijñāna sujñānadalli nindu,
cidghanadalli cicchaktiya kūḍi, cicchakti naṣṭavāgi vastulēpa.
Dr̥kkiṅge agōcaravāgi,
tatvamasiyemba bhittiya bhāvavittale,
attalari, baṅkēśvaraliṅgava.