ಕಾಲ ಸಂಹಾರವ ಮಾಡುವಲ್ಲಿ ,
ಕಾಳಗತ್ತಲೆಯ ಕೋಣೆಯೊಳಗೊಂದು
ಬಾಲಲೀಲೆಯ ಶಿಶು ಉಳಿಯಿತ್ತು.
ಬಾಲಲೀಲೆ ಹಿಂಗಿ, ವಿಷದ ಏಳಿಗೆಯಾಯಿತ್ತು.
ಕಣ್ಣಿನಲ್ಲಿ ಮೊಲೆ ಹುಟ್ಟಿ, ಎದೆಯಲ್ಲಿ ಯೋನಿ ಹುಟ್ಟಿ,
ಕೈಯಲ್ಲಿ ಬೆಸಲಾಯಿತ್ತು.
ಅದು ಗಂಡೋ, ಹೆಣ್ಣೋ ಎಂದು ಅಂಡವ ಹಿಡಿದು ನೋಡಿ,
ಅಂಡಜಮುಗ್ಧೆಯ ಮಕ್ಕಳಿರಾ ಎಂದರವರು.
ಅದರಂದವ ನೋಡಿ, ಹೆಣ್ಣೂ ಅಲ್ಲ ಗಂಡೂ ಅಲ್ಲ,
ನಡುವೆ ಒಂದು ಕೆಂಡದಂತಿದೆ.
ಬಂಕೇಶ್ವರಲಿಂಗಕ್ಕೆ ತೋರಿ, ಕುರುಹಿಟ್ಟುಕೊಂಬೊ.
Transliteration Kāla sanhārava māḍuvalli,
kāḷagattaleya kōṇeyoḷagondu
bālalīleya śiśu uḷiyittu.
Bālalīle hiṅgi, viṣada ēḷigeyāyittu.
Kaṇṇinalli mole huṭṭi, edeyalli yōni huṭṭi,
kaiyalli besalāyittu.
Adu gaṇḍō, heṇṇō endu aṇḍava hiḍidu nōḍi,
aṇḍajamugdheya makkaḷirā endaravaru.
Adarandava nōḍi, heṇṇū alla gaṇḍū alla,
naḍuve ondu keṇḍadantide.
Baṅkēśvaraliṅgakke tōri, kuruhiṭṭukombo.