ಅಕ್ಕನ ಮೂಲೆಯ ಮೊದಲಿನಲ್ಲಿ
ಮೂವರು ತಮ್ಮಂದಿರು ಬಂದರು.
ತಮ್ಮ ತಮ್ಮ ಅಂಗವ ತೋರಿ,
ಅಕ್ಕನ ಮುಂದೆ ಬೆತ್ತಲೆ ಆಡುತ್ತಿದ್ದರೆ,
ಬೆತ್ತಲೆಯ ಮುಟ್ಟಿ ಕಂಡು,
ತಮ್ಮನದ ತನ್ನದರಲ್ಲಿ ಇಕ್ಕಿಕೊಂಡಳು.
ಅಕ್ಕ ತಮ್ಮನ ಕೂಡಿ ಒಪ್ಪವಾಗಿ ಬಾಳುತ್ತಿದ್ದರು,
ಬಂಕೇಶ್ವರಲಿಂಗವನರಿತ ಕಾರಣ.
Transliteration Akkana mūleya modalinalli
mūvaru tam'mandiru bandaru.
Tam'ma tam'ma aṅgava tōri,
akkana munde bettale āḍuttiddare,
bettaleya muṭṭi kaṇḍu,
tam'manada tannadaralli ikkikoṇḍaḷu.
Akka tam'mana kūḍi oppavāgi bāḷuttiddaru,
baṅkēśvaraliṅgavanarita kāraṇa.