ಕಣ್ಣು ನೀರ ನುಂಗಿದಂತೆ, ಬಣ್ಣ ಛಾಯವ ನುಂಗಿದಂತೆ,
ಉರಿ ಸಾರವ ಕೊಂಡಂತೆ, ನಿರುತ ನಿರ್ವಾಣವಾದಂತೆ,
ಸರಶಂಕೆಯ ಬಿಟ್ಟು, ಶರಧಿಯ ಒಡಗೂಡಿದಂತೆ,
ತನುವಿನ ಸುಂಕವ ಮನೆದೆರಿಗೆಯ ಕರ್ತಂಗೆ ಒಪ್ಪಿಸಿದೆ.
ಸಂದಿತ್ತು, ನೀವು ಕೊಟ್ಟ ಮಣಿಹವೆಂಬುದಕ್ಕೆ ಮುನ್ನವೆ
ಬಯಲಾಯಿತ್ತು , ಬಂಕೇಶ್ವರಲಿಂಗದಲ್ಲಿ.
Transliteration Kaṇṇu nīra nuṅgidante, baṇṇa chāyava nuṅgidante,
uri sārava koṇḍante, niruta nirvāṇavādante,
saraśaṅkeya biṭṭu, śaradhiya oḍagūḍidante,
tanuvina suṅkava manederigeya kartaṅge oppiside.
Sandittu, nīvu koṭṭa maṇihavembudakke munnave
bayalāyittu, baṅkēśvaraliṅgadalli.