ಅಯ್ಯಾ, ಶಿವಭಕ್ತರು ನುಡಿವಲ್ಲಿ ಜಾಣತನದಿಂದ ನುಡಿವರು.
ನೀಡುವಲ್ಲಿ ಭೇದದಿಂದ ನೀಡುವರು.
ಕೊಡುವಲ್ಲಿ ಸತ್ಪಾತ್ರಕ್ಕೆ ಕೊಡುವರು.
ಬಿಡುವಲ್ಲಿ ಶರಣಗೋಷ್ಠಿಯ ಬಿಡುವರು.
ಪೊಡವಿಯೊಳಿವರ ಭಕ್ತರೆನ್ನಬಹುದೆ?
ಅದಂತಿರಲಿ, ಎನ್ನೊಡೆಯ ಬಸವಪ್ರಿಯನಡಿಗಳ
ನೆನೆವ ಶರಣ ಲಿಂಗೈಕ್ಯರು
ಮೆಡುವ ಪಡುಗ ಪಾದರಕ್ಷೆಯ ಕಾಯಿರಿಸಯ್ಯ,
ಚೆನ್ನಬಸವಣ್ಣಾ.
Transliteration Ayyā, śivabhaktaru nuḍivalli jāṇatanadinda nuḍivaru.
Nīḍuvalli bhēdadinda nīḍuvaru.
Koḍuvalli satpātrakke koḍuvaru.
Biḍuvalli śaraṇagōṣṭhiya biḍuvaru.
Poḍaviyoḷivara bhaktarennabahude?
Adantirali, ennoḍeya basavapriyanaḍigaḷa
neneva śaraṇa liṅgaikyaru
meḍuva paḍuga pādarakṣeya kāyirisayya,
cennabasavaṇṇā.