ಉತ್ತರ, ದಕ್ಷಿಣ , ಪೂರ್ವ, ಪಶ್ಚಿಮ
ನಾಲ್ಕು ಪಥವನು ಏಕವ ಮಾಡಿ,
ಊರ್ಧ್ವಮುಖವ ಮಾಡಿ,
ಈಡಾ ಪಿಂಗಳ ನಾಳಮಂ ಕಟ್ಟಿ, ಸುಷಮ್ನನಾಳವಂ ಎತ್ತಿ,
ಮನ ಪವನ ಬಿಂದು ಒಡಗೂಡಿ,
ಚಂದ್ರ ಸೂರ್ಯ ಶಿಖಿಯರಂ ಮುಪ್ಪುರಿಯ ಮಾಡಿ,
ಒಡಗೂಡಿ ಏಕವಾಗಿ ಹುರಿಗೂಡಿ,
ಮತ್ರ್ಯಲೋಕವ ಬಿಟ್ಟು, ದೇವಲೋಕವ ಮೆಟ್ಟಿನಿಂದು,
ಭಾವ ಬಯಲಾಗಿ, ಬಯಕೆ ಸವೆದು,
ಇನ್ನು ಈ ಲೋಕದೊಳಗೆ ಬಂದು
ಬದುಕಿದೆನೆಂಬುದನಕ್ಕೆ ಹೇಯ ಹುಟ್ಟಿ,
ಇದಾವುದನೂ ಒಲ್ಲದಿರ್ಪರು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Transliteration Uttara, dakṣiṇa, pūrva, paścima
nālku pathavanu ēkava māḍi,
ūrdhvamukhava māḍi,
īḍā piṅgaḷa nāḷamaṁ kaṭṭi, suṣamnanāḷavaṁ etti,
mana pavana bindu oḍagūḍi,
candra sūrya śikhiyaraṁ muppuriya māḍi,
oḍagūḍi ēkavāgi hurigūḍi,
matryalōkava biṭṭu, dēvalōkava meṭṭinindu,
bhāva bayalāgi, bayake savedu,
innu ī lōkadoḷage bandu
badukidenembudanakke hēya huṭṭi,
idāvudanū olladirparu,
basavapriya kūḍalacennabasavaṇṇā.