ಓಂ ಏಕವ ನ ದ್ವಿತೀಯಾಃ ಸ್ವಯಂಭುವೇ
ಚಕಿತಮಭಿದತ್ತೇ ಶ್ರುತಿರಪಿ ಅತ್ಯತಿಷ್ಠದ್ದ ಶಾಂಗುಲವೆಂಬ
ಬಿರುದು ನಿಮಗೆ ಸಂದಿತ್ತು ಗುರುವೆ.
ನ ಗುರೋರಧಿಕಂ ನ ಗುರೋರಧಿಕಂ ವಿದಿತಂ ವಿದಿತಂ ಎಂಬ
ಬ್ರಹ್ಮಬ್ರಹ್ಮ ಶಬ್ದಕ್ಕೆ ಪರಬ್ರಹ್ಮ ಗುರುವೆ ಗುರು.
ಬಸವಪ್ರಿಯ ಕೂಡಲಸಂಗಮದೇವಾ
ಮಾಂ ತ್ರಾಹಿ ಕರುಣಾಕರನೆ.
TransliterationŌṁ ēkava na dvitīyāḥ svayambhuvē
cakitamabhidattē śrutirapi atyatiṣṭhadda śāṅgulavemba
birudu nimage sandittu guruve.
Na gurōradhikaṁ na gurōradhikaṁ viditaṁ viditaṁ emba
brahmabrahma śabdakke parabrahma guruve guru.
Basavapriya kūḍalasaṅgamadēvā
māṁ trāhi karuṇākarane.
ವಚನಕಾರ ಮಾಹಿತಿ
ಹಡಪದ ಅಪ್ಪಣ್ಣ
ಅಂಕಿತನಾಮ:
ಬಸವಪ್ರಿಯ ಕೂಡಲ ಚೆನ್ನ ಬಸವಣ್ಣ
ವಚನಗಳು:
251
ಕಾಲ:
12ನೆಯ ಶತಮಾನ
ಕಾಯಕ:
ಹಡಪದ -ತಾಂಬೂಲ ಕರಂದ (ಬಸವಣ್ಣನವರಿಗೆ ತಾಂಬೂಲ ಕೊಡುವುದು)-ಆಪ್ತ ಕಾರ್ಯದರ್ಶಿ