•  
  •  
  •  
  •  
Index   ವಚನ - 105    Search  
 
ಗುರು ಗುರು ಎಂದು ಪೂಜೆಯ ಮಾಡುವರು. ಮತ್ತೆಯಾ ಗುರುವ ನರನೆಂದೆಂಬರು, ಅವರು ಗುರುದ್ರೋಹಿಗಳು. ಲಿಂಗ ಲಿಂಗವೆಂದು ಪೂಜೆಯ ಮಾಡುವರು, ಆ ಲಿಂಗವ ಶಿಲೆ ಎಂಬರು,ಅವರು ಲಿಂಗದ್ರೋಹಿಗಳು. ಜಂಗಮ ಜಂಗಮವೆಂದು ಪೂಜೆಯ ಮಾಡುವರು, ಆ ಜಂಗಮವ ಜಗದ ಹಂಗಿಗರೆಂಬರು, ಅವರು ಜಂಗಮದ್ರೋಹಿಗಳು. ಈ ಮೂರು ಕರ್ತರೆಂದು ಅರಿಯದವಂಗೆ ಕುಂಭೀಪಾಕ ನಾಯಕನರಕ ತಪ್ಪದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Transliteration Guru guru endu pūjeya māḍuvaru. Matteyā guruva naranendembaru, avaru gurudrōhigaḷu. Liṅga liṅgavendu pūjeya māḍuvaru, ā liṅgava śile embaru,avaru liṅgadrōhigaḷu. Jaṅgama jaṅgamavendu pūjeya māḍuvaru, ā jaṅgamava jagada haṅgigarembaru, avaru jaṅgamadrōhigaḷu. Ī mūru kartarendu ariyadavaṅge kumbhīpāka nāyakanaraka tappadu, basavapriya kūḍalacennabasavaṇṇā.