ಪ್ರಾಣಲಿಂಗಿ ಪ್ರಾಣಲಿಂಗಿ ಎಂದು ನುಡಿದಾಡುತಿಪ್ಪಿರಿ.
ಪ್ರಾಣಲಿಂಗದ ನೆಲೆಯನಾರು ಬಲ್ಲರು ?
ಪ್ರಾಣಲಿಂಗಿಯಾದರೆ,
ವಾಯು ಪ್ರಾಣವ ನಿಲಿಸಿ,
ಲಿಂಗ ಪ್ರಾಣವಾಗುವದೀಗ ಪ್ರಾಣಲಿಂಗ.
ಪ್ರಾಣಲಿಂಗಿಯಾದರೆ, ಗುರುಲಿಂಗಜಂಗಮದ
ಪಾದೋದಕ ಪ್ರಸಾದವ
ತನ್ನೊಳರಿದು ಮೈರೆದು ಪರವಶನಾಗಿ,
ಲಿಂಗದೊಳಗೆ ಬೆರೆಸುವದೀಗ ಪ್ರಾಣಲಿಂಗಿ.
ಇದನರಿಯದೆ ವಾಯು ಪ್ರಾಣವಾಗಿ,
ಬಾಯನುಡಿಯ ಬಲ್ಲಿದವರಾಗಿ,
ಬೊಗುಳಿಯಾಡುವ ಜಾವಳರ ಮಾತ ಮೆಚ್ಚುವನೆ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ?
Transliteration Prāṇaliṅgi prāṇaliṅgi endu nuḍidāḍutippiri.
Prāṇaliṅgada neleyanāru ballaru?
Prāṇaliṅgiyādare,
vāyu prāṇava nilisi,
liṅga prāṇavāguvadīga prāṇaliṅga.
Prāṇaliṅgiyādare, guruliṅgajaṅgamada
pādōdaka prasādava
tannoḷaridu mairedu paravaśanāgi,
liṅgadoḷage beresuvadīga prāṇaliṅgi.
Idanariyade vāyu prāṇavāgi,
bāyanuḍiya ballidavarāgi,
boguḷiyāḍuva jāvaḷara māta meccuvane,
nam'ma basavapriya kūḍalacennabasavaṇṇa?