ಬ್ರಹ್ಮನ ಹುಟ್ಟು, ವಿಷ್ಣುವಿನ ಸ್ಥಿತಿ,
ರುದ್ರನ ಲಯಕ್ಕೆ ಒಳಗಾದ ಮನುಜರೆಲ್ಲ
ತಾವು ಪ್ರಸಾದಿ, ಪ್ರಾಣಲಿಂಗಿಗಳೆಂದು ನುಡಿದುಕೊಂಬಿರಿ.
ಪ್ರಸಾದಿಸ್ಥಲ ಎಲ್ಲರಿಗೆಂತಾದುದಣ್ಣಾ?
ಪ್ರಸಾದಿಸ್ಥಲ ಪರಮಸುಖ ಪರಿಣಾಮ.
ಮನ ಮೇರೆದಪ್ಪಿ ತನುವನೆ
ಪ್ರಸಾದವ ಮಾಡುವದೀಗ ಪ್ರಸಾದ.
ಇದನರಿಯದೆ ಸದಮದವಾಗಿ ಮುಡಿ
ನೋಡಿ ಒಡಲ ಕೆಡಿಸಿಕೊಂಬ
ಜಡಮನುಜರ ನುಡಿಯ ಕೇಳಲಾಗದು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Transliteration Brahmana huṭṭu, viṣṇuvina sthiti,
rudrana layakke oḷagāda manujarella
tāvu prasādi, prāṇaliṅgigaḷendu nuḍidukombiri.
Prasādisthala ellarigentādudaṇṇā?
Prasādisthala paramasukha pariṇāma.
Mana mēredappi tanuvane
prasādava māḍuvadīga prasāda.
Idanariyade sadamadavāgi muḍi
nōḍi oḍala keḍisikomba
jaḍamanujara nuḍiya kēḷalāgadu,
basavapriya kūḍalacennabasavaṇṇā.