ಮರದೊಳಗಣ ಕಿಚ್ಚು ಮರನ ಸುಡುತ್ತಿದ್ದಿತ್ತಯ್ಯ.
ಮರ ಬೆಂದು ನಿಂದುರಿಯಿತ್ತು ,
ಮಣ್ಣು ಜರಿದು ಬಿದ್ದಿತ್ತು, ಉರಿ ಹೋಗಿ ನಂದಿತ್ತು,
ಸ್ವಯಂಪ್ರಕಾಶವಾಗಿಪ್ಪ ಎಲೆ ಉಳಿಯಿತ್ತ.
ಉರಿ ಬಂದು ಎನ್ನ ಕರಸ್ಥಲದಲ್ಲಿ ಅಡಗಿತ್ತು.
ಇದ ಕಂಡು ನಾ ಬೆರಗಾಗಿ ನೋಡುತಿರ್ದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Transliteration Maradoḷagaṇa kiccu marana suḍuttiddittayya.
Mara bendu ninduriyittu,
maṇṇu jaridu biddittu, uri hōgi nandittu,
svayamprakāśavāgippa ele uḷiyitta.
Uri bandu enna karasthaladalli aḍagittu.
Ida kaṇḍu nā beragāgi nōḍutirdenayyā,
basavapriya kūḍalacennabasavaṇṇā.