ಮೀಸಲು ಸೂಸಲಾಗಿ, ದೋಸೆ ಕಡಬು ಹೊಯ್ದು,
ಹಬ್ಬವ ಮಾಡಿಹೆನೆಂಬ ಹೇಸಿಗಳ ಮಾತ ಕೇಳಲಾಗದು.
ಅದೇಕೆ ಎಂದರೆ, ಲಿಂಗ ಜಂಗಮದ ಭಾಷೆ ಸಲ್ಲದಾಗಿ,
ಇನ್ನು ಮೀಸಲಾವುದೆಂದರೆ,
ಭಾಷೆಗೇರಿಸಿದ ತನುವೆ ಅಡ್ಡಣಿಗೆ,
ಘನವೆ ಹರಿವಾಣ, ಮನ ಮೀಸಲೋಗರ,
ಈ ಅನುವನರಿದು, ಮಹಾಲಿಂಗಕ್ಕೆ
ಅರ್ಪಿತವ ಮಾಡುವನೆ ಸದ್ಭಕ್ತನು,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Transliteration Mīsalu sūsalāgi, dōse kaḍabu hoydu,
habbava māḍ'̔ihenemba hēsigaḷa māta kēḷalāgadu.
Adēke endare, liṅga jaṅgamada bhāṣe salladāgi,
innu mīsalāvudendare,
bhāṣegērisida tanuve aḍḍaṇige,
ghanave harivāṇa, mana mīsalōgara,
ī anuvanaridu, mahāliṅgakke
arpitava māḍuvane sadbhaktanu,
basavapriya kūḍalacennabasavaṇṇā.