ಹಲವಂದ ಚಂದದಲ್ಲಿ ಹಾಡಿದರೇನಯ್ಯ,
ಲಿಂಗದ ನೆಲೆಯನರಿಯದನ್ನಕ್ಕ?
ಕಲಿಯಾಗಿ ವೈರಾಗ್ಯ ತಲೆಗೇರಿ ಹರಿದಾಡಿದರೇನಯ್ಯ?
ಮಾಯೆಯ ಬಲೆಯ ನುಸುಳಿಸಿದಲ್ಲದೆ
ನಿಮ್ಮ ನೆಲೆಯ ಕಾಣಬಾರದು,
ಬಸಪ್ರಿಯ ಕೂಡಲಚೆನ್ನಬಸವಣ್ಣಾ.
Transliteration Halavanda candadalli hāḍidarēnayya,
liṅgada neleyanariyadannakka?
Kaliyāgi vairāgya talegēri haridāḍidarēnayya?
Māyeya baleya nusuḷisidallade
nim'ma neleya kāṇabāradu,
basapriya kūḍalacennabasavaṇṇā.