•  
  •  
  •  
  •  
Index   ವಚನ - 242    Search  
 
ಹುತ್ತದ ಮೇಲೊಂದು ಕಸ್ತೂರಿಯ ಮೃಗವ ಕಂಡೆ. ಅದಕ್ಕೆ ಉದಯ ಅಸ್ತಮಯವಿಲ್ಲ. ಒದವಿದ ಅಮೃತವನುಂಬುವದು, ಸದಮಲ ವಾಸನೆಯ ತೀಡುವುದು. ಆ ವಾಸನೆಯ ಬೆಂಬಳಿವಿಡಿದು, ನಾನು ಆ ವಾಸಕ್ಕೆ ಹೋಗಿ, ದೇಶದ ಹಂಗು ಮರೆದು, ಸಾಸಿರ ಮುಖವಾಗಿಪ್ಪ ಈಶನೊಳು ಲೇಸಿಂದ ಬೆರೆದು, ಮೀಸಲಳಿಯದೆ ಐಕ್ಯವಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Transliteration Huttada mēlondu kastūriya mr̥gava kaṇḍe. Adakke udaya astamayavilla. Odavida amr̥tavanumbuvadu, sadamala vāsaneya tīḍuvudu. Ā vāsaneya bembaḷiviḍidu, nānu ā vāsakke hōgi, dēśada haṅgu maredu, sāsira mukhavāgippa īśanoḷu lēsinda beredu, mīsalaḷiyade aikyavādenayyā, basavapriya kūḍalacennabasavaṇṇā.