ಶಾಸ್ತ್ರಮದ, ಸಂಪದಮದ,
ಉಭಯಕೂಡಿಕೊಂಡಾತ್ಮಮದ,
ಅರಿದು ಎಲ್ಲರಿಗೆ ಹೇಳಿದೆನೆಂಬ ಗೆಲ್ಲ ಸೋಲದ ಮದ.
ಇಂತೀ ಎಲ್ಲಾ ಮದವ ಸೇವಿಸುತ್ತ,
ಅರಿಯದ ಮದವನೊಂದು ನುಡಿದಡೆ,
ಬಿರುನುಡಿಯೆಂದೆಂಬರು.
ಅರಿಯದವ ಇಂತಿವ ಅರಿಯದಂತೆ
ಸಂಚದಲ್ಲಿ ಸಂಚದಂತಿರಬೇಕು.
ಧರ್ಮೇಶ್ವರಲಿಂಗ ಹೀಂಗಲ್ಲದೆ ಅರಿಯಬಾರದು.
Transliteration Śāstramada, sampadamada,
ubhayakūḍikoṇḍātmamada,
aridu ellarige hēḷidenemba gella sōlada mada.
Intī ellā madava sēvisutta,
ariyada madavanondu nuḍidaḍe,
birunuḍiyendembaru.
Ariyadava intiva ariyadante
san̄cadalli san̄cadantirabēku.
Dharmēśvaraliṅga hīṅgallade ariyabāradu.