•  
  •  
  •  
  •  
Index   ವಚನ - 9    Search  
 
ವಿಘ್ನೇಶ್ವರ ಹರನ ಮಗನೆಂಬ ಪಂಚಮಹಾಪಾತಕರ ನುಡಿಯ ಕೇಳಲಾಗದು. ಪಾರ್ವತಿ ಹರನ ಸತಿಯೆಂಬ ಲಿಂಗದ್ರೋಹಿಗಳ ನೆನೆಯಲಾಗದು. ಬಹುರೂಪಿ ಹರನ ಸರಿಯೆಂಬ ಗುರುದ್ರೋಹಿಗಳ ನೆನೆಯಲಾಗದು. ಅಂದೆಂತೆಂದಡೆ:`ಯತ್ರ ಜೀವಾತ್ಮ ತತ್ರ ಶಿವ' ಎಂದೆನಿಸಿಕೊಂಬಾತನೊಬ್ಬ ಗಣೇಶ್ವರನು. ಭೂಮಿಪೀಠಾಕಾಶವಾಗಿರ್ದಾತನೊಬ್ಬ ಗಣೇಶ್ವರನು. ಸಿರಿಯಾಳನ ಮಗನ ಬಾಣಸವ ಮಾಡಿಸಿದಾತನೊಬ್ಬ ಗಣೇಶ್ವರನು. ಅರ್ಜುನನ ಕೂಡ ಯುದ್ಧವ ಮಾಡಿ, ತನ್ನ ಸತಿಯಳಿಗೆ ತೋರಿಸಿದಾತನೊಬ್ಬ ಗಣೇಶ್ವರನು. ಅಂಗಜನ ಸಂಹಾರವ ಮಾಡಿದಾತನೊಬ್ಬ ಆದಿರುದ್ರನೆಂಬ ಗಣೇಶ್ವರನು. ದಕ್ಷನ ಸಂಹಾರವ ಮಾಡಿದಾತನೊಬ್ಬ ವೀರಭದ್ರನೆಂಬ ಗಣೇಶ್ವರನು. ಹತ್ತು ಅವತಾರ ವಿಷ್ಣುವಿಂಗೆ, ಅನಂತ ಅವತಾರ ಬ್ರಹ್ಮಂಗೆ. ಇಂತಿವರೆಲ್ಲರಿಗೂ ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರ. ಈ ನಾಲ್ಕೂ ಪ್ರಳಯಚಕ್ರವೆಂದೆನಿಸಿಹವು. ಇಂತಿವರೊಳಗಾದವರೆಲ್ಲರು ಇನ್ನುಳಿದವರು ನರದೇಹಿಗಳಿಗೆ ಪ್ರಳಯವು. ಉಪಮಿಸಲಾಗದು, ಅಜಾತ ಪವಿತ್ರ ನಿರ್ಲೆಪ [ಜಂಗಮಲಿಂಗ ಪ್ರಭುವೆ].
Transliteration Vighnēśvara harana maganemba pan̄camahāpātakara nuḍiya kēḷalāgadu. Pārvati harana satiyemba liṅgadrōhigaḷa neneyalāgadu. Bahurūpi harana sariyemba gurudrōhigaḷa neneyalāgadu. Andentendaḍe:`Yatra jīvātma tatra śiva' endenisikombātanobba gaṇēśvaranu. Bhūmipīṭhākāśavāgirdātanobba gaṇēśvaranu. Siriyāḷana magana bāṇasava māḍisidātanobba gaṇēśvaranu. Arjunana kūḍa yud'dhava māḍi, Tanna satiyaḷige tōrisidātanobba gaṇēśvaranu. Aṅgajana sanhārava māḍidātanobba ādirudranemba gaṇēśvaranu. Dakṣana sanhārava māḍidātanobba vīrabhadranemba gaṇēśvaranu. Hattu avatāra viṣṇuviṅge, ananta avatāra brahmaṅge. Intivarellarigū kālacakra karmacakra nādacakra binducakra.Ī nālkū praḷayacakravendenisihavu. Intivaroḷagādavarellaru innuḷidavaru naradēhigaḷige praḷayavu. Upamisalāgadu, ajāta pavitra nirlepa [jaṅgamaliṅga prabhuve].