ದೇಹವ ಮುಟ್ಟಿದವರು ನಿರ್ದೇಹಿಯ ಮುಟ್ಟುವುದದು
ದುರ್ಲಭವಯ್ಯಾ.
ನಿರ್ದೇಹಿಯ ಮುಟ್ಟಿದವರು ದೇಹವ ಮುಟ್ಟರು ನೋಡಯ್ಯಾ.
ಮುಟ್ಟಿದವ ಕ್ಷಣಿಕ ಸುಖ ಕಂಡ;
ಮುಟ್ಟದವ ನಿಜಾನಂದ ಸುಖ ಕಂಡ,
ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Dēhava muṭṭidavaru nirdēhiya muṭṭuvudadu
durlabhavayya.
Nirdēhiya muṭṭidavaru dēhava muṭṭaru nōḍayya.
Muṭṭidava kṣaṇika sukha kaṇḍa;
muṭṭadava nijānanda sukha kaṇḍa,
nōḍayya, kapilasid'dhamallikārjunayya.