ಮಾಡಬಾರದ ನೇಮವ ಮಾಡಿ ಕೆಡದಿರಾ, ಮನವೆ.
ಮಾಡುವ ನೇಮ, ಮಾಡಬಾರದ ನೇಮಂಗಳವು,
ಭೂತ ಭವಿಷ್ಯ ವರ್ತಮಾನಂಗಳವು.
ಮಾಡುವ ನೇಮಂಗಳು:
ನಿತ್ಯ ಲಿಂಗಾರ್ಚನೆ ಜಂಗಮದಾಸೋಹವೆಂದು[ದು]
ಕಪಿಲಸಿದ್ಧಮಲ್ಲಿಕಾರ್ಜುನನ ವಚನ, ಮನವೆ.
Transliteration Māḍabārada nēmava māḍi keḍadirā, manave.
Māḍuva nēma, māḍabārada nēmaṅgaḷavu,
bhūta bhaviṣya vartamānagaḷu.
Māḍuva nēmagaḷu:
Nitya liṅgārcane jaṅgamadasōhavendu[du]
kapilasid'dhamallikārjunana vacana, manave.