•  
  •  
  •  
  •  
Index   ವಚನ - 64    Search  
 
ತನುಗುಣ ಸಂಕರದಿಂದ ಪ್ರಸಾದಸಂಗ ಕೆಟ್ಟಿತ್ತು. ಮನಗುಣ ಸಂಕರದಿಂದ ಲಿಂಗಸಂಗ ಕೆಟ್ಟಿತ್ತು. ಲೋಭಗುಣ ಸಂಕರದಿಂದ ಜಂಗಮಸಂಗ ಕೆಟ್ಟಿತ್ತು. ಈ ತ್ರಿವಿಧದ ಆಗುಚೇಗೆಯನರಿಯದ ಕಾರಣ ಭವಘೋರ ನರಕಕ್ಕೊಳಗಾದರು, ಇದು ಕಾರಣ ಕೂಡಲಚೆನ್ನಸಂಗಯ್ಯಾ, ಈ ತ್ರಿವಿಧದ ಅನುಭವ ಬಲ್ಲ ಬಸವಣ್ಣಂಗೆ ನಮೋ ನಮೋ [ಎಂಬೆ]
Transliteration Tanuguṇa saṅkaradinda prasādasaṅga keṭṭittu. Managuṇa saṅkaradinda liṅgasaṅga keṭṭittu. Lōbhaguṇa saṅkaradinda jaṅgamasaṅga keṭṭittu. Ī trividhada āgucēgeyanariyada kāraṇa bhavaghōra narakakkoḷagādaru, idu kāraṇa kūḍalacennasaṅgayyā, ī trividhada anubhava balla basavaṇṇaṅge namō namō [embe]