•  
  •  
  •  
  •  
Index   ವಚನ - 151    Search  
 
"ಇತಿಹಾಸೇಷು ವೇದೇಷು ಪುರಾಣೇಷು ಪುರಾತನೈಃ| ಮಹರ್ಷಿಭಿರ್ಮಹಾದೇವೋ ಮಹನೀಯಃ ಪ್ರತಿಷ್ಠಿತಃ"|| ಇಂತೆಂದುದಾಗಿ ಪುರಾತನರಲ್ಲಿ ಆದ್ಯಂತರಾಗಿದ್ದ ಮಹಾಋಷಿಗಳೆಲ್ಲರೂ ರತ್ನಸುವರ್ಣ ರಜತ ತಾಮ್ರ ಚಂದ್ರಕಾಂತ ಸ್ಫಟಿಕ ಪವಳಲಿಂಗಂಗಳ ಆರಾಧಿಸಿದರು. ಅಗಸ್ತ್ಯ ದಧೀಚಿ ಕಂಕದ ಬಾಣಾಸುರ ಪುರಂದರ ಬ್ರಹ್ಮ ವಿಷ್ಣು ದೂರ್ವಾಸ ನಂದಿಕೇಶ್ವರ ಸ್ಕಂದ ಭೃಂಗಿರಿಟಿ ವೀರಭದ್ರಾದಿಗಣಂಗಳೆಲ್ಲರೂ "ರುದ್ರೇಣ ದೀಕ್ಷಿತೋ ಭೂತ್ವಾ ಸ್ಕಂದಃ ಶಿವಸಮುದ್ಭವಃ| ಶಿವಾಚಾರರಹಸ್ಯಸ್ಯ ಪಾತ್ರತಾಂ ಪರಮಾಂ ಗತಃ|| [ಇಂತೆಂದುದಾಗಿ] ಇದನರಿದು ಪರಶುರಾಮ ಪರಾಶರ ವಶಿಷ್ಠ ವಾಲ್ಮೀಕಿ ಕಮಲಾಕರ ವಿಶ್ವಾಮಿತ್ರ ಮಹಾಮುನಿಗಳೆಲ್ಲರೂ "ಪಾಣಿನಿಶ್ಚ ಕಣಾದಶ್ಚ ಕಪಿಲೋ ಗೌತಮಾದಯಃ| ಪ್ರಸಾದಸೇವನಾದ್ಧ್ಯಾನಾದರ್ಚನಾದ್ಧಾರಣಾದಪಿ"|| ಇಂತೆಂದುದಾಗಿ ಇದು ಕಾರಣ ಕೂಡಲಚೆನ್ನಸಂಗಮದೇವರನಾರಾಧಿಸಿ, ಪ್ರಸಾದ ಪಾದೋದಕವ ಕೊಂಡು ಅತಿಶುದ್ಧರಾದರು ಎಲ್ಲಾ ದೇವಗಣಂಗಳು, ಎಲ್ಲಾ ಋಷಿಜನಂಗಳು.
Transliteration Itihāsēṣu vēdēṣu purāṇēṣu purātanaiḥ| maharṣibhirmahādēvō mahanīyaḥ pratiṣṭhitaḥ|| intendudāgi purātanaralli ādyantarāgidda mahā'r̥ṣigaḷellarū ratnasuvarṇa rajata tāmra candrakānta sphaṭika pavaḷaliṅgaṅgaḷa ārādhisidaru. Agastya dadhīci kaṅkada bāṇāsura purandara brahma viṣṇu dūrvāsa nandikēśvara skanda bhr̥ṅgiriṭi vīrabhadrādigaṇaṅgaḷellarū rudrēṇa dīkṣitō bhūtvā skandaḥ śivasamudbhavaḥ| Śivācārarahasyasya pātratāṁ paramāṁ gataḥ|| [intendudāgi] idanaridu paraśurāma parāśara vaśiṣṭha vālmīki kamalākara viśvāmitra mahāmunigaḷellarū pāṇiniśca kaṇādaśca kapilō gautamādayaḥ| prasādasēvanād'dhyānādarcanād'dhāraṇādapi|| intendudāgi idu kāraṇa kūḍalacennasaṅgamadēvaranārādhisi, prasāda pādōdakava koṇḍu atiśud'dharādaru ellā dēvagaṇaṅgaḷu, ellā r̥ṣijanaṅgaḷu.